Song: Ellellu Oduva Manase Movie: Sidlingu
Singer: Avinash Chebbi
ಎಲ್ಲೆಲ್ಲು ಓಡುವ ಮನಸೇ ಓ ಓ ಯಾಕಿಂತ ಹುಚ್ಚುಚ್ಚು ವರಸೆ
ಇಲ್ಲದ ಸಲ್ಲದ ತರಲೆ ಆ ಆ ಹೋದಲ್ಲಿ ಬಂದಲ್ಲಿ ತರಲೆ
ಹರುಷವ ಮುಂದಿಡುವೆ ವ್ಯಸನವ ಬೆಂಬಿಡುವೆ
ಬಂದರೂ ಅಳುವೂ ನಗಿಸಿ ನಲಿವ......ಮ..ನ..ವೇ.....
ಎಲ್ಲೆಲ್ಲು ಓಡುವ ..............................................ಹೋದಲ್ಲಿ ಬಂದಲ್ಲಿ ತರಲೆ
ನಾನು ನನ್ನದೆನ್ನುವ ನಿನ್ನಯ ತರ್ಕವೇ ಬಾಲಿಶ
ಎಲ್ಲಾ ಶೂನ್ಯವೆನ್ನುವ ನಿನ್ನಯ ವರ್ಗವೇ ಅಂಕುಶ
ಕಲ್ಮಶ ನಿಷ್ಕಲ್ಮಶ ತರ ತರ ನಿನ್ನ ವೇಷ
ದ್ವಾದಶಿ ಏಕಾದಶಿ ಎಲ್ಲಾ ನಿನ್ನ ಖುಷಿ
ಇದ್ದರೂ ಜೊತೆಗೆ ದೂರ ಇರುವ......ಮ..ನ..ವೇ.....
ಎಲ್ಲೆಲ್ಲು ಓಡುವ.............................................ಹೋದಲ್ಲಿ ಬಂದಲ್ಲಿ ತರಲೆ
ಬೇಕು ಬೇಡ ಎನ್ನುವ ಗೊಂದಲ ಸೃಷ್ಟಿಸೋ ಮಾಯೆ ನೀ
ತಪ್ಪು ಒಪ್ಪು ಎಲ್ಲವ ತೋರುವ ಕಾಣದ ಛಾಯೇ ನೀ
ಕಲ್ಪನೆ ಪರಿಕಲ್ಪನೆ ವಿಧ ವಿಧ ನಿನ್ನ ತಾಣ
ಬಣ್ಣನೆ ಬದಲಾವಣೆ ಎಲ್ಲ ನಿನ್ನ ಹೊಣೆ
ಕಂಡರೂ ಸಾವು ಬದುಕು ಎನುವ......ಮ..ನ..ವೇ.....
ಎಲ್ಲೆಲ್ಲು ಓಡುವ .............................................ಹೋದಲ್ಲಿ ಬಂದಲ್ಲಿ ತರಲೆ
No comments:
Post a Comment