Friday, March 16, 2012

ಸಚಿನ್ ೧೦೦ನೇ ಶತಕ


 


ಮಾರ್ಚ್ ೧೬,ಮೀರ್ಪುರ: ಅಂತು  ಇಂತೂ  ಒಂದು  ವರ್ಷದ  ಕ್ರಿಕೆಟ್  ಅಭಿಮಾನಿಗಳ  ಹರಕೆಗೆ  ಇಂದು  ಶೇರ್-ಬಾಂಗ್ಲ  ನ್ಯಾಷನಲ್  ಕ್ರೀಡಾಂಗಣದಲ್ಲಿ  "ಕ್ರಿಕೆಟ್ ದೇವರು"  ವರವನ್ನು  ನೀಡಿದ್ದಾರೆ .
ಹೌದು,  ಇಂದು  ಸಚಿನ್  100  ನೇ  ಶತಕ  ದಾಖಲಿಸಿ  ಕ್ರಿಕೆಟ್  ಲೋಕದ  ಹೊಸ  ಮುನ್ನುಡಿಗೆ ಕಾರಣರಾಗಿದ್ದಾರೆ.

ಕಳೆದ  ಭಾನುವಾರ  ಆರಂಭವಾದ  ಏಷಿಯಾ  ಕಪ್  2012  ಸರಣಿಯ  4ನೇ  ಪಂದ್ಯದಲ್ಲಿ  ಈ  ಶತಕ ಗಳಿಸಿ  ಕ್ರಿಕೆಟ್ ನಲ್ಲಿ  ನನ್ನ  ಸರಿಸಮಾನ  ಯಾರೂ  ಇಲ್ಲ  ಎಂಬುದನ್ನು  ಸಾಬೀತು ಪಡಿಸಿದ್ದಾರೆ.ಇದೆಲ್ಲದರ  ಮಧ್ಯೆ   ಒಂದು  ಅಸಮಾಧಾನಕರ  ಸಂಗತಿಯೆಂದರೆ  ಈ  ಶತಕ  ಗಳಿಸಲು ಸಚಿನ್  ತೆಗೆದುಕೊಂಡ  ಕಾಲ  ಬರೋಬ್ಬರಿ  ೧  ವರ್ಷ  ಮತ್ತು  ೫  ದಿನಗಳು.
ಅದೇನೇ  ಇರಲಿ 38ರ  ಹರೆಯದ  ಸಚಿನ್  ಇಂದು  ಬಾಂಗ್ಲಾದ  ವಿರುದ್ಧ  ಗಳಿಸಿದ  ಶತಕ (114(147)) ಅವರು  ಇದುವರೆಗೂ  ಗಳಿಸಿರುವ  ಶತಕಗಳನ್ನು  ಮೀರಿ  ನಿಲ್ಲುತ್ತದೆ.

ಸಚಿನ್  ಇದುವರೆಗೆ  462  ಏಕದಿನ  ಪಂದ್ಯಗಳಿಂದ  44.64  ರ  ಸರಾಸರಿಯಲ್ಲಿ  18374  ರನ್ನುಗಳನ್ನು ಗಳಿಸಿದ್ದಾರೆ .ಇದರಲ್ಲಿ  49  ಶತಕಗಳು  ಅಡಗಿವೆ.
188  ಟೆಸ್ಟ್  ಪಂದ್ಯಗಳನ್ನಾಡಿರುವ  ಇವರು  15470  ರನ್ನುಗಳನ್ನು  55.44  ರ  ಸರಾಸರಿಯಲ್ಲಿ  ಗಳಿಸಿದ್ದಾರೆ.ಇದರಲ್ಲಿ  51  ಶತಕಗಳು  ಅಡಗಿವೆ.

ಸಚಿನ್ ಇನ್ನಷ್ಟು ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಎಂದು AmithSongStore ಹಾರೈಸುತ್ತದೆ. Well Done Sachin......................

List of Sachin Tendulkar's 100 international Centuries 



No comments:

Post a Comment